Your Cart

ಸುಂದರ ಕಥೆಗಳ

On Sale
Amerikan D2.00
Added to cart

ವಿದೇಶೀ ಜಾನಪದ ಕಥೆ : ಬುದ್ಧಿವಂತ ಆಳು

ತುರ್ಕಿ ದೇಶದಲ್ಲಿ ಒಬ್ಬ ಅರಸನಿದ್ದ. ಒಂದು ದಿನ ಒಬ್ಬ ಕಾಜಿ (ಆಗಿನ ಕಾಲದ ನ್ಯಾಯಾಧೀಶ) ಆ ರಾಜನ ಬಳಿಗೆ ಬಂದು ನನ್ನನ್ನು ನಿಮ್ಮ ಆಸ್ಥಾನದ ಕಾಜಿಯಾಗಿ ನಿಯಮಿಸಿಕೊಳ್ಳಿ ಎಂದು ಹೇಳಿದ ಆಗ ಬಾದಶಾಹನು ನೀನು ನನ್ನ ಆಸ್ಥಾನದ ಕಾಜಿಯಾಗಬೇಕಾದರೆ ನಾನು ತೆಗೆದುಕೊಳ್ಳುವ ಪರೀಕ್ಷೆಯಲ್ಲಿ ನೀನು ಉತ್ತೀರ್ಣನಾಗಬೇಕು ಎಂದ ಅದಕ್ಕೆ ಕಾಜಿ ಒಪ್ಪಿದ. ಹಾಗಾದರೆ ನಾನು ನಿನಗೆ ಮೂರು ಪ್ರಶ್ನೆಗಳನ್ನು ಕೇಳುತ್ತೇನೆ ಆ ಮೂರು ಪ್ರಶ್ನೆಗಳಿಗೆ ನೀನು ಸಮರ್ಪಕವಾದ ಉತ್ತರವನ್ನು ನೀಡಿದರೆ ನಾನು ನಿನ್ನನ್ನು ನನ್ನ ಆಸ್ಥಾನದ ಕಾಜಿಯನ್ನಾಗಿ ನೇಮಿಸಿಕೊಳ್ಳುತ್ತೇನೆ ಎಂದ ಬಾದಶಾಹ. ಆಗಲಿ. ಕೇಳಿರಿ, ನನ್ನ ಬುದ್ದಿಗೆ ನಿಲುಕುವಂತಿದ್ದರೆ ಉತ್ತರಿಸುತ್ತೇನೆ ಎಂದ ಕಾಜಿ.

ನನ್ನ ಮೊದಲನೆ ಪ್ರಶ್ನೆ ಅಲ್ಲಾಹನು ಎಲ್ಲಿ ಕೂಡುತ್ತಾನೆ? ಎರಡನೆ ಪ್ರಶ್ನೆ ಅವನ ಮುಖ ಯಾವ ಕಡೆಗಿರುತ್ತದೆ? ಮೂರನೆಯ ಪ್ರಶ್ನೆ ಅವನು ಏನು ಮಾಡುತ್ತಾನೆ? ಎಂದು ಮೂರು ಪ್ರಶ್ನೆಗಳನ್ನು ಬಾದಶಾಹ ಕೇಳಿದ.

ಆ ಪ್ರಶ್ನೆಗಳನ್ನು ಕೇಳಿ ಕಾಜಿ ತಬ್ಬಿಬ್ಟಾದ. ಪ್ರಶ್ನೆಗಳು ಇಷ್ಟು ಕಠಿಣವಾಗಿರಬಹುದೆಂದು ಅವನು ಊಹಿಸಿರಲಿಲ್ಲ. ಅವನಿಗೆ ಆ ಪ್ರಶ್ನೆಗಳಲ್ಲಿ ಒಂದರ ಉತ್ತರವೂ ಗೊತ್ತಿರಲಿಲ್ಲ. ಅವನು ಚಿಂತಿತನಾದ ಅವನ ವ್ಯಾಕುಲತೆಯನ್ನು ಕಂಡ ಬಾದಶಾಹನು ನಾನು ನಿನಗೆ ಐದು ದಿನಗಳ ಸಮಯವನ್ನು ನೀಡುತ್ತೇನೆ. ಆ ಐದು ದಿನಗಳಲ್ಲಿ ನನ್ನ ಪ್ರಶ್ನೆಗೆ ಉತ್ತರ ಹುಡುಕಿಕೊಂಡು ಬಾ ಎಂದ ಬಾದಶಾಹ. ಬೀಸೋ ದೊಣ್ಣೆಯಿಂದ ತಪ್ಪಿಸಿ ಕೊಂಡರೆ ನೂರು ವರ್ಷ ಆಯಸ್ಸು ಎಂಬ ಗಾದೆಯಂತೆ ಯೋಚಿಸಲು ಐದು ದಿವಸಗಳ ಸಮಯವಾದರು ಸಿಕ್ಕಿತಲ್ಲ ಎಂದು ನಿಶ್ಚಿಂತನಾಗಿ ಕಾಜಿ ಮನೆಗೆ ಮರಳಿದ. ಮನೆಗೆ ಬಂದ ನಂತರ ಇಡೀ ದಿನವೆಲ್ಲ ಅರಸನ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಯೋಚನೆಯಲ್ಲಿಯೇ ಮುಳುಗಿದ. ಉತ್ತರ ಹೊಳೆಯದಿದ್ದಾಗ ಇನ್ನಷ್ಟು ವ್ಯಾಕುಲನಾದ. ಅದನ್ನು ಆತನ ಆಳು ಗಮನಿಸುತ್ತಿದ್ದ. ತನ್ನ ಯಜಮಾನ ಯಾವುದೋ ಸಮಸ್ಯೆಯ ಸುಳಿಗೆ ಸಿಕ್ಕಿ ಹಾಕಿಕೊಂಡಿದ್ದಾನೆಂದು ಆತನಿಗೆ ಅನಿಸಿತು. ಅವನು ತನ್ನ ಯಜಮಾನನಿಗೆ ಚಿಂತೆಯ ಕಾರಣವನ್ನು ಕೇಳಿದ ಆದರೆ ಕಾಜಿ ಅವನನ್ನು ಬೈಯ್ದು ಸುಮ್ಮನಾಗಿಸಿದ ಆದರೆ ಆಳು ಸುಮ್ಮನಾಗಲಿಲ್ಲ ಪುನಃ ಪುನಃ ಕೇಳುತ್ತಲೇ ಇದ್ದ. ಕೊನೆಗೆ ಕಾಜಿ ತನ್ನ ಚಿಂತೆಗೆ ಕಾರಣವೇನೆಂಬುದನ್ನು ಆಳಿಗೆ ತಿಳಿಸಿದ. ಆ ಆಳು ತುಂಬ ಬುದ್ಧಿವಂತನಾಗಿದ್ದ. ನೀವೇನೂ ಚಿಂತಿಸಬೇಕಾಗಿಲ್ಲ ಹುಜೂರ ನಾನು ಬಾದಶಾಹನಲ್ಲಿಗೆ ಹೋಗಿ ನಿಮ್ಮ ಪರವಾಗಿ ಅವರ ಪ್ರಶ್ನೆಗಳಿಗೆ ಉತ್ತರಿಸುತೇನೆ ಎಂದ ಆಳು. ಮೊದಲು ಕಾಜಿ ಇದಕ್ಕೆ ಒಪ್ಪಲಿಲ್ಲ. ಆದರೆ ಐದು ದಿನಗಳ ಗಡುವು ಮುಗಿದು ಬಾದಶಾಹನು ತನ್ನನ್ನು ಬರಹೇಳಿದ್ದರಿಂದ ಕಾಯಿಲೆಯ ನೆಪಮಾಡಿ ತನ್ನ ಆಳನ್ನು ಬಾದಶಾಹನ ದರ್ಬಾರಿಗೆ ಕಳುಹಿಸಲು ಒಪ್ಪಿದ. ಕಾಜಿಯ ಆಳು ನಿರ್ಭಯನಾಗಿ ರಾಜನ ಆಸ್ಥಾನಕ್ಕೆ ಹೋದ, ರಾಜನಿಗೆ ವಂದಿಸಿ ಜಹಾಂಪನಾ ನನ್ನ ಯಜಮಾನರಿಗೆ ಮೈ ಹುಷಾರಿಲ್ಲದ ಕಾರಣ ಅವರ ಪರವಾಗಿ ನಾನು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಬಂದಿದ್ದೇನೆ ದಯವಿಟ್ಟು ನಿಮ್ಮ ಪ್ರಶ್ನೆಗಳನ್ನು ಕೇಳಿ ಎಂದ.ಹಾಗಾದರೆ ನೀನು ನನ್ನ ಪ್ರಶ್ನೆಗಳಿಗೆ ಉತ್ತರಿಸುವೆಯಾ? ಬಾದಶಾಹ ಕೇಳಿದ.

ಉತ್ತರಿಸುವೆ ಜಹಾಂಪನಾ ಆದರೆ ಧಾರ್ಮಿಕ ನಿಯಮದಂತೆ ನೀವು ನನ್ನನ್ನು ಉಚ್ಚ ಆಸನದಲ್ಲಿ ಕುಳ್ಳಿರಿಸಿ ನೀವು ಕೆಳಗೆ ಕುಳಿತುಕೊಳ್ಳಬೇಕಾಗುತ್ತದೆ ಎಂದ ಆಳು. ಅವನ ಮಾತನ್ನು ಕೇಳಿ ಬಾದಶಾಹ ಕೋಪಗೊಳ್ಳಲಿಲ್ಲ. ಆಳನ್ನು ತನ್ನ  ಸಿಂಹಾಸನದಲ್ಲಿ ಕುಳ್ಳಿರಿಸಿ ತಾನು ಕೆಳಗೆ ಕುಳಿತುಕೊಂಡ ನಂತರ ಬಾದಶಾಹ ತನ್ನ ಮೊದಲನೆ ಪ್ರಶ್ನೆಯನ್ನು ಕೇಳಿದ

ಅಲ್ಲಾಹನು ಎಲ್ಲಿ ಕೂಡುತ್ತಾನೆ?

ಈ ಪ್ರಶ್ನೆಗೆ ಉತ್ತರಿಸಬೇಕಾದರೆ ನೀವು ಆಸ್ಥಾನಕ್ಕೆ ಒಂದು ಹಸುವನ್ನು ತರಿಸಬೇಕಾಗುತ್ತದೆ ಎಂದ ಆಳು.

ಬಾದಶಾಹ ಆಸ್ಥಾನಕ್ಕೆ ಒಂದು ಹಸುವನ್ನು ತರಿಸಿದ. ಆಗ ಆಳು ಬಾದಶಾಹನನ್ನು ಕುರಿತು ಈ ಹಸುವಿನಲ್ಲಿ ಹಾಲು ಇದೆಯೇ? ಎಂದು ಕೇಳಿದ.

ಇದೆ ಎಂದ ಅರಸ.

ಎಲ್ಲಿದೆ? ಆಳು ಪುನಃ ಪ್ರಶ್ನಿಸಿದ.

ಹಸುವಿನ ಕೆಚ್ಚಲಿನಲ್ಲಿ ಎಂದ ಬಾದಶಾಹ.

ಅದಕ್ಕೆ ಆ ಆಳು ನಿಮ್ಮ ಉತ್ತರ ತಪ್ಪು.$ ಜಹಾಂಪನಾ ಹಾಲು ಬರಿ ಹಸುವಿನ ಕೆಚ್ಚಲಿನಲ್ಲಷ್ಟೇ ಇಲ್ಲ ಅದರ ಇಡೀ ದೇಹದಲ್ಲಿ ವ್ಯಾಪಿಸಿದೆ ಎಂದ ಆಳು.ನಂತರ ಆಳು ಸ್ವಲ್ಪ$ ಹಾಲು ತರಲು ಹೇಳಿದ.

ಈ ಹಾಲಿನಲ್ಲಿ ಬೆಣ್ಣೆ ಇದೆಯೇ ಜಹಾಂಪನಾ? ಎಂದು ಕೇಳಿದ.

ಇದೆ ಎಂದ ಬಾದಶಾಹ.

ಎಲ್ಲಿದೆ? ಪ್ರಶ್ನಿಸಿದ ಆಳು.

ಅದೇ ಪ್ರಶ್ನೆಯನ್ನು ಆಸ್ಥಾನಿಕರಿಗೂ ಕೇಳಿದ. ಯಾರಿಂದಲೂ ಆ ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ಕೊಡಲಾಗಲಿಲ್ಲ.ಆಗ ನೌಕರನೇ ವಿವರಿಸಿದ ಹಾಲಿನಲ್ಲಿ ಬೆಣ್ಣೆ ಹೇಗೆ ಎಲ್ಲೆಡೆ ವ್ಯಾಪ್ತವಾಗಿದೆಯೋ ಹಾಗೆಯೇ ಪರಮಾತ್ಮನು ವಿಶ್ವದ ಎಲ್ಲೆಡೆ ಇದ್ದಾನೆ. ಆದ್ದರಿಂದ ಅವನು ಕೇವಲ ಒಂದು ಸ್ಥಾನದಲ್ಲಿ ಮಾತ್ರ ಕೂಡುವುದಿಲ್ಲ.

ಬಾದಶಾಹ ತನ್ನ ಎರಡನೆಯ ಪ್ರಶ್ನೆಯನ್ನು ಕೇಳಿದ. ಅಲ್ಲಾಹನ ಮುಖ ಯಾವ ಕಡೆಗಿದೆ?

ಈ ಪ್ರಶ್ನೆಗೆ ಆಳು ಒಂದು ಮೇಣದ ಬತ್ತಿಯನ್ನು ತರಿಸಿ ಅದನ್ನು ಹೊತ್ತಿಸಿದನು. ಮೇಣದ ಬತ್ತಿಯ ಜಾÌಲೆಯ ಮುಖ ಯಾವ ದಿಕ್ಕಿಗಿದೆ? ಎಂದು ಆಸ್ಥಾನಿಕರನ್ನು ಪ್ರಶ್ನಿಸಿದ. ಈ ಪ್ರಶ್ನೆಗೂ ಯಾರಿಂದಲೂ ಸಮರ್ಪಕವಾದ ಉತ್ತರ ನೀಡಲಾಗಲಿಲ್ಲ ಅದಕ್ಕೂ ಕಾಜಿಯ ಆಳೇ ಉತ್ತರಿಸಿದ. ಮೇಣದಬತ್ತಿಯ ಪ್ರಕಾಶವು ಹೇಗೆ ಎಲ್ಲ ದಿಕ್ಕುಗಳಲ್ಲಿ ಸಮಾನವಾಗಿದೆಯೋ ಹಾಗೆಯೇ ಅಲ್ಲಾಹನ ಮುಖವು ಎಲ್ಲ ದಿಕ್ಕುಗಳಲ್ಲೂ ಇದೆ. ಅವನ ಉತ್ತರದಿಂದ ಸಂತುಷ್ಟನಾದ ಬಾದಶಾಹ ತನ್ನ ಮೂರನೆಯ ಪ್ರಶ್ನೆಯನ್ನು ಕೇಳಿದ.

ಪರಮಾತ್ಮನು ಏನು ಮಾಡುತ್ತಿರುತ್ತಾನೆ?

ಈ ಪ್ರಶ್ನೆಗೆ ಕಾಜಿಯ ಆಳು  ಈಗ ಪರಮಾತ್ಮನು ಏನು ಮಾಡಿದ್ದಾನೋ ಅದನ್ನೇ ಮಾಡುತ್ತಿರುತ್ತಾನೆ. ಅವನು ಆಳನ್ನು ಅರಸನನ್ನಾಗಿಯೂ ಅರಸನನ್ನು ಆಳಾಗಿಯೂ ಮಾಡುತ್ತಾನೆ. ಸ್ವಲ್ಪ$ಹೊತ್ತಿಗಾಗಿ ಆಳಾದ ನನ್ನನ್ನು ಅರಸನನ್ನಾಗಿ ಮತ್ತು ಅರಸರಾದ ನಿಮ್ಮನ್ನು ಆಳನ್ನಾಗಿ ಮಾಡಿದ ಅವನು ಹೀಗೆ ಸದಾ ಪರಿವರ್ತನೆಗಳನ್ನು ಮಾಡುತ್ತಿರುತ್ತಾನೆ ಎಂದ.

ಅವನ ಉತ್ತರಗಳಿಂದ ಸಂತುಷ್ಟನಾದ ಬಾದಶಾಹ ಅವನನ್ನೇ ತನ್ನ ಆಸ್ಥಾನದ ಕಾಜಿಯನ್ನಾಗಿ ನಿಯಮಿಸಿಕೊಂಡ.

ಮುರಲೀಧರ ಕುಲಕರ್ಣಿ, ಬೀದರ್

You will get a PDF (18MB) file